ಪ್ರಚಲಿತ ಪತ್ರಿಕೆ ಮಾಲಕರು, ಪ್ರಕಾಶಕರು, ಸಂಪಾದಕರು ಆದ ಅನಾಥ ರಕ್ಷಕಿ ಮಮತಾ ನಾಯ್ಕ ಹಾಗೂ ಅವರ ಪತಿ, ಮಗನ ಮೇಲೆ ಹಲ್ಲೆ ದೌರ್ಜನ್ಯ ಕೊಲೆ ಯತ್ನ. ಒಂಬತ್ತು ತಿಂಗಳ ತುಂಬು ಗರ್ಭಿಣಿಯ ಮೇಲೆ ಹಲ್ಲೆ.
30-09-2024 07:57 am

ಸಿದ್ಧಾಪುರ: ದಿನಾಂಕ 29-09-2024 ರವಿವಾರ ಮದ್ಯಾಹ್ನ 11 ಘಂಟೆಯ ಸುಮಾರಿಗೆ ಸಿದ್ದಾಪುರ ತಾಲೂಕಾ ಸರಕಾರಿ ಆಸ್ಪತ್ರೆಯ ಬಾಗಿಲಿನಲ್ಲಿ ದುಷ್ಕರ್ಮಿಗಳ ತಂಡ ದಾಳಿ ನಡೆಸಿ ಪ್ರಚಲಿತ ಪತ್ರಿಕೆಯ ಮಾಲಕರು, ಪ್ರಕಾಶಕರು, ಸಂಪಾದಕರು ಆದ ಅನಾಥ ರಕ್ಷಕಿ ಮಮತಾ ನಾಯ್ಕ ಹಾಗೂ ಅವರ ಪತಿ ಪತ್ರಕರ್ತ ಹಾಗೂ ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮದ ಮುಖ್ಯಸ್ಥರಾದ ನಾಗರಾಜ ನಾಯ್ಕ, ಅವರ ಎರಡು ವರ್ಷದ ಮಗ ಯುವರಾಜನ ಮೇಲೆ ಹಲ್ಲೆ ದೌರ್ಜನ್ಯ ನಡೆಸಲಾಗಿದೆ.
ಮಮತಾ ನಾಯ್ಕ ಒಂಬತ್ತು ತಿಂಗಳ ತುಂಬು ಗರ್ಭಿಣಿಯಾಗಿದ್ದು ಹಲ್ಲೆಗೊಳಗಾದ ನಂತರ ಸಿದ್ಧಾಪುರ ತಾಲೂಕಾ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
×

ರವಿವಾರ ಮದ್ಯಾಹ್ನ11 ಗಂಟೆಯ ಸುಮಾರಿಗೆ ಆಶ್ರಮದಲ್ಲಿ ಆಶ್ರಯ ಪಡೆದಿದ್ದ ಅನಾಥರನ್ನು ಅನಾರೋಗ್ಯದ ನಿಮಿತ್ತ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಆಸ್ಪತ್ರೆಯ ಬಾಗಲಿನಲ್ಲಿ ಹೊಂಚುಹಾಕಿ ಕಾದುಕೊಂಡಿದ್ದ ದುಷ್ಕರ್ಮಿಗಳು ಎಕಾಎಕಿ ದಾಳಿ ನಡೆಸಿದ್ದು, ತಮ್ಮನ್ನು ಕೊಲ್ಲುವ ಯತ್ನ ನಡೆಸಿದ್ದರು. ಎಂದು ನಾಗರಾಜ ನಾಯ್ಕ ತಿಳಿಸಿದರು. ಹಲ್ಲೆಗೊಳಗಾದ ತಕ್ಷಣ ನಾಗರಾಜ ನಾಯ್ಕ ಪೋಲೀಸರಿಗೆ ಪೋನ್ ಮಾಡಿದ್ದು ತಕ್ಷಣ ಸ್ಥಳಕ್ಕೆ ಆಗಮಿಸಿದ ಪೋಲೀಸರು ನಾಲ್ವರು ಆರೋಪಿಗಳನ್ನು ಪೋಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದು ಉಳಿದವರು ಪೋಲೀಸರನ್ನು ಕಂಡ ತಕ್ಷಣ ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇದರ ಹಿಂದೆ ಸಿದ್ದಾಪುರದಲ್ಲಿ ಗೂಂಡಾ ಪ್ರವ್ರತ್ತಿಯಲ್ಲಿರುವ ರಾಜಕೀಯ ಮುಖಂಡನೊಬ್ಬನ ಕೈವಾಡ ಇರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.
ಈ ಬಗ್ಗೆ ನಾಗರಾಜ ನಾಯ್ಕ ಸಿದ್ದಾಪುರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
×
ಮಾಹಿತಿಯ ಮೂಲ :ಸ್ವಂತ